ಮಳೆಗಾಲ ಪ್ರಾರಂಭವಾಗುವ ಮೊದಲು ಎಲ್ಲಾ ಮಕ್ಕಳಿಗೆ ಇನ್ಫ್ಲುಯೆನ್ಸ ಲಸಿಕೆ ನೀಡಲು ತಜ್ಞರು ಬಲವಾಗಿ ಶಿಫಾರಸು ಮಾಡುತ್ತಿದ್ದಾರೆ.
ಇನ್ಫ್ಲುಯೆನ್ಸ ಮತ್ತು ಅದರ ತಡೆಗಟ್ಟುವಿಕೆಯ ಮಹತ್ವದ ಬಗ್ಗೆ ಇನ್ನಷ್ಟು ತಿಳಿಯಿರಿ
ಎಲ್ಲಾ ಮಕ್ಕಳಿಗೆ ಇನ್ಫ್ಲುಯೆನ್ಸ ಲಸಿಕೆ ನೀಡಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಇನ್ಫ್ಲುಯೆನ್ಸ ಅಥವಾ ಫ್ಲೂ ಮತ್ತು ಕೋವಿಡ್ –19 ರೋಗಲಕ್ಷಣಗಳು ಹೋಲಿಕೆ ಹೊಂದಿರುವುದರಿಂದ , ಫ್ಲೂ ಶಾಟ್ ಮಕ್ಕಳನ್ನು ರಕ್ಷಿಸುತ್ತದೆ ಮತ್ತು ಪೋಷಕರಲ್ಲಿ ಭಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ನಂಬಿದ್ದಾರೆ.
ಪೋಷಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಏಳುವುದು ಸಹಜ. ‘ಇನ್ಫ್ಲುಯನ್ಸ ಅಥವಾ ಫ್ಲೂ ಎಂದರೆ ಏನು?’ ಇದು ನೆಗಡಿಯಿಂದ ಹೇಗೆ ಭಿನ್ನವಾಗಿರುತ್ತದೆ? ತಮ್ಮ ಮಗುವನ್ನು ಇದರಿಂದ ರಕ್ಷಿಸುವುದು ಏಕೆ ಅಗತ್ಯವಾಗಿದೆ? ಎಂಬ ಪ್ರಶ್ನೆಗಳನ್ನು ಅವರು ಕೇಳಿಕೊಳ್ಳಬಹುದು.
ರೋಗ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿದೆ.
ನಮ್ಮ ಮಕ್ಕಳ ಶೀತ ಮತ್ತು ಕೆಮ್ಮಿನೊಂದಿಗೆ ವ್ಯವಹರಿಸುವುದು ಇಂದು ನಮ್ಮ ಜೀವನದ ಒಂದು ಭಾಗವಾಗಿ ಹೋಗಿದೆ. ಜ್ವರ, ಮೂಗು ಕಟ್ಟುವುದು ಮತ್ತು ಇತರ ಶೀತದಂತಹ ಲಕ್ಷಣಗಳು ಉಲ್ಬಣಗೊಂಡು, ಮಕ್ಕಳು ಫ್ಲೂ ಅಥವಾ ಇನ್ಫ್ಲುಯೆನ್ಸದ ಹೆಚ್ಚು ಅಪಾಯಕಾರಿ ರೋಗಕ್ಕೆ ತುತ್ತಾಗಬಹುದು.
ಇನ್ಫ್ಲುಯೆನ್ಸ / ಫ್ಲೂ ಅತ್ಯಂತ ಸಾಂಕ್ರಾಮಿಕ ವೈರಲ್ ಸೋಂಕು, ಇದು ಮಗುವಿನ ಉಸಿರಾಟದ ಮಾರ್ಗಗಳು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರಬಹುದು ಮತ್ತು ಇದು ಪ್ರತಿವರ್ಷ ಎದುರಾಗುವ ಸಾಮಾನ್ಯ ಉಸಿರಾಟದ ಕಾಯಿಲೆಗಳಲ್ಲಿ ಒಂದಾಗಿದೆ.3 ಜಾನ್ ಹಾಪ್ಕಿನ್ಸ್ ಅವರು ನಡೆಸಿದ ಸಂಶೋಧನೆಯ ಪ್ರಕಾರ ಹೆಚ್ಚಿನ ಮಕ್ಕಳು ಈ ರೋಗದಿಂದ ಒಂದು ವಾರದೊಳಗೆ ಗುಣಮುಖರಾಗುತ್ತಾರೆ, ಮತ್ತು ಇತರರು ಹೆಚ್ಚು ಗಂಭೀರವಾದ ಸೋಂಕನ್ನು ಹೊಂದಿರಬಹುದು ಹಾಗೂ ಇವರಿಗೆ ಆಸ್ಪತ್ರೆಯ ಆರೈಕೆಯ ಅಗತ್ಯವಿರುತ್ತದೆ ಮತ್ತು ಶ್ವಾಸಕೋಶದ ಸೋಂಕು (ನ್ಯುಮೋನಿಯಾ) ಅಥವಾ ಸಾವಿಗೆ ಕಾರಣವಾಗಬಹುದುದಾಗಿದೆ. ಕೇವಲ ಭಾರತ ಒಂದರಲ್ಲಿ ಪ್ರತಿವರ್ಷ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 1 ಲಕ್ಷ ಮಕ್ಕಳು ಇನ್ಫ್ಲುಯೆನ್ಸ / ಫ್ಲೂನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಅಧ್ಯಯನಗಳು ತೋರಿಸುತ್ತವೆ.
ಅಪಾಯದಲ್ಲಿರುವವರೆಂದರೆ?
ಯಾರು ಬೇಕಾದರೂ ಇನ್ಫ್ಲುಯೆನ್ಸ / ಫ್ಲೂ ಗೆ ಒಳಗಾಗಬಹುದು. ಹೀಗಿದ್ದೂ, ರೋಗಕ್ಕೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿರುವವರೆಂದರೆ 6 ತಿಂಗಳಿಂದ 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವೃದ್ಧರು, ಆರೋಗ್ಯ ಕಾರ್ಯಕರ್ತರು ಮತ್ತು ದೀರ್ಘಕಾಲದ ಮಧುಮೇಹ, ಆಸ್ತಮಾ, ಕ್ಯಾನ್ಸರ್, ಇಮ್ಯುನೊಸಪ್ರೆಶನ್ ಮುಂತಾದ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳು.
ಪ್ರಸರಣ / ಹರಡುವಿಕೆ
ಇನ್ಫ್ಲುಯೆನ್ಸ / ಫ್ಲೂ ವೈರಸ್ ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ ಬಿಡುಗಡೆಯಾದ ಹನಿಗಳಿಂದ ಮುಖ್ಯವಾಗಿ ಹರಡುತ್ತದೆ. ಆದ್ದರಿಂದ, ಸೋಂಕಿತ ವ್ಯಕ್ತಿಗೆ ಹತ್ತಿರವಿರುವುದರಿಂದ ಮತ್ತೊಬ್ಬರಿಗೆ ಸೋಂಕು ಬರುವ ಅಪಾಯವಿದೆ. ಗಾಳಿಯಲ್ಲಿ ಬಿಡುಗಡೆಯಾದ ಹನಿಗಳು ಸುಮಾರು 6 ಅಡಿಗಳಷ್ಟು ದೂರದಲ್ಲಿ ಹರಡಬಹುದು ಮತ್ತು ಸುತ್ತಮುತ್ತಲಿನ ಇತರರನ್ನು ತಲುಪುವ ಸಾಧ್ಯತೆ ಇರುತ್ತದೆ.5
ಚಿಕ್ಕ ಮಕ್ಕಳು ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ದೀರ್ಘಕಾಲದ ಸೋಂಕು ಹರಡುವ ಸಮಯವನ್ನು ಹೊಂದಿರುತ್ತಾರೆ ಆದ್ದರಿಂದ ಹೆಚ್ಚಿನ ಸಮಯದವರೆಗೆ ಇವರಿಂದ ಇತರರಿಗೆ ಸೋಂಕು ತಗಲುವ ಸಾಧ್ಯತೆ ಇದೆ..
ರೋಗ ತಡೆಗಟ್ಟುವಿಕೆ
ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಹಲವಾರು ಆ್ಯಂಟಿವೈರಲ್ (ಆ್ಯಂಟಿ ಇನ್ಫ್ಲುಯೆನ್ಸ) ಔಷಧಿಗಳಿದ್ದರೂ, ರೋಗವನ್ನು ತಡೆಗಟ್ಟುವುದು ಪ್ರಮುಖ ಆದ್ಯತೆಯಾಗಿರಬೇಕು. ಕೆಲವು ಸರಳ ಮತ್ತು ಪರಿಣಾಮಕಾರಿ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಸೋಂಕಿನ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇವುಗಳೆಂದರೆ 6:
- ಕೆಮ್ಮುವಾಗ / ಸೀನುವಾಗ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳುವುದನ್ನು ಮಕ್ಕಳಿಗೆ ಕಲಿಸುವುದು.
- ಕೈಗಳನ್ನು ಚೆನ್ನಾಗಿ ಮತ್ತು ನಿಯಮಿತವಾಗಿ ತೊಳೆಯುವುದು. ನೀರು ಸುಲಭವಾಗಿ ಲಭ್ಯವಿಲ್ಲದಿದ್ದಾಗ, ಸ್ಯಾನಿಟೈಸರ್ ಅನ್ನು ಬಳಸುವುದು ಸಹ ಪರಿಣಾಮಕಾರಿ ಎಂದು ಸಾಬೀತಾಗಿದೆ.
- ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಸೋಂಕಿಗೆ ಒಳಗಾದವರೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವುದು.
- ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು.
- ವಾರ್ಷಿಕ ಇನ್ಫ್ಲುಯೆನ್ಸ ವ್ಯಾಕ್ಸಿನೇಷನ್ ಪಡೆಯುವುದು.
ವಾರ್ಷಿಕ ಇನ್ಫ್ಲುಯೆನ್ಸ / ಫ್ಲೂ ವ್ಯಾಕ್ಸಿನೇಷನ್ ಪಡೆಯುವುದು ಇನ್ಫ್ಲುಯೆನ್ಸದಿಂದ ರಕ್ಷಿಸಲು ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಜಾಗತಿಕ ಮತ್ತು ಭಾರತೀಯ ಆರೋಗ್ಯ ಅಧಿಕಾರಿಗಳು 6 ತಿಂಗಳಿಂದ 5 ವರ್ಷದ ಮಕ್ಕಳಿಗೆ ವಾರ್ಷಿಕ ಇನ್ಫ್ಲುಯೆನ್ಸ ಲಸಿಕೆ ನೀಡುವಂತೆ ಬಲವಾಗಿ ಶಿಫಾರಸು ಮಾಡುತ್ತಾರೆ. 6 ಇನ್ಫ್ಲುಯೆನ್ಸ ವೈರಸ್‌ಗಳ ವಿರುದ್ಧದ ರೋಗ ನಿರೋಧಕ ಶಕ್ತಿಯು ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ ಮತ್ತು ಪ್ರತಿ ವರ್ಷ ಚಲಾವಣೆಯಲ್ಲಿನ ವೈರಸ್ ತಳಿಗಳು ಬದಲಾಗುತ್ತವೆ, ಆದ್ದರಿಂದ ಪ್ರತಿ ವರ್ಷ ವ್ಯಾಕ್ಸಿನೇಷನ್ ಮಾಡಬೇಕು. 6 ವಾರ್ಷಿಕವಾಗಿ ಇನ್ಫ್ಲುಯೆನ್ಸ ವಿರುದ್ಧ ಲಸಿಕೆ ಪಡೆಯುವುದು ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಆದ್ದರಿಂದ ಸೋಂಕಿನ ಮತ್ತಷ್ಟು ಹರಡುವಿಕೆ ಕಡಿಮೆಯಾಗುತ್ತದೆ.
ಇನ್ಫ್ಲುಯೆನ್ಸ ರೋಗ ಮತ್ತು ವ್ಯಾಕ್ಸಿನೇಷನ್ ಮೂಲಕ ಅದರ ತಡೆಗಟ್ಟುವಿಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ
ಹಕ್ಕುತ್ಯಾಗ: GlaxoSmithKline Pharmaceuticals Limited ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ. ಸಾರ್ವಜನಿಕ ಹಿತದೃಷ್ಟಿಯಿಂದ ನೀಡಲಾಗಿದೆ. ಈ ವಿಷಯದಲ್ಲಿ ಕಂಡುಬರುವ ಮಾಹಿತಿಯು ಸಾಮಾನ್ಯ ಅರಿವಿಗಾಗಿ ಮಾತ್ರ. ಈ ವಿಷಯದಲ್ಲಿರುವ ಯಾವುದೂ ವೈದ್ಯಕೀಯ ಸಲಹೆಯನ್ನು ಹೊಂದಿಲ್ಲ. ವೈದ್ಯಕೀಯ ಪ್ರಶ್ನೆಗಳು ಯಾವುದಾದರೂ ಇದ್ದರೆ ಅಥವಾ ನಿಮ್ಮ ಸ್ಥಿತಿಯ ಬಗ್ಗೆ ನೀವು ಹೊಂದಿರುವ ಯಾವುದೇ ಪ್ರಶ್ನೆ ಅಥವಾ ಕಾಳಜಿ ಕುರಿತು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಲಸಿಕೆ-ತಡೆಗಟ್ಟಬಹುದಾದ ಕಾಯಿಲೆಗಳ ಸಂಪೂರ್ಣ ಪಟ್ಟಿ ಮತ್ತು ಪ್ರತಿ ರೋಗದ ಸಂಪೂರ್ಣ ವ್ಯಾಕ್ಸಿನೇಷನ್ ವೇಳಾಪಟ್ಟಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ. ದಯವಿಟ್ಟು ಯಾವುದೇ GSK ಉತ್ಪನ್ನದೊಂದಿಗೆ ಪ್ರತಿಕೂಲ ಘಟನೆಗಳನ್ನು ಕಂಪನಿಗೆ india.pharmacovigilance@gsk.com ನಲ್ಲಿ ವರದಿ ಮಾಡಿ.
CL Code: NP-IN-FLT-OGM-210009, DoP Jun 2021
Community Experiences
Join the conversation and become a part of our vibrant community! Share your stories, experiences, and insights to connect with like-minded individuals.