ಮೆನಿಂಗೊಕೊಕಲ್ ಮೆನಿಂಜೈಟಿಸ್: ಅಪರೂಪದ ವಿನಾಶಕಾರಿ ಕಾಯಿಲೆ

Written by MomJunction
Last Updated on

ಮೆನಿಂಜೈಟಿಸ್ ಎಂದರೇನು?

ಮೆನಿಂಜೈಟಿಸ್ ಎಂದರೆ ಮಿದುಳು ಪೊರೆಯ ಉರಿಯೂತ, ಮೆದುಳು ಮತ್ತು ಬೆನ್ನುಹುರಿಯನ್ನು ರಕ್ಷಿಸುವ ಪೊರೆಗಳ ಉರಿಯೂತ ಇದ್ದಾಗಿದ್ದು, ಮೆನಿಂಜಸ್ ಎಂದು ಸಹ ಕರೆಯಲಾಗುತ್ತದೆ. ಮೆದುಳು ಮತ್ತು ಬೆನ್ನುಹುರಿಯನ್ನು ಸುತ್ತುವರೆದಿರುವ ದ್ರವದಕ್ಕೆ ಉಂಟಾಗುವ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಸಾಮಾನ್ಯವಾಗಿ ಈ ಉರಿಯೂತಕ್ಕೆ ಕಾರಣವಾಗುತ್ತದೆ (1), ಆದಾಗ್ಯೂ, ಇತರ ಸೋಂಕುಗಳು, ಔಷಧಗಳು ಮತ್ತು ಗಾಯಗಳ ಕಾರಣದಿಂದಲೂ ಮೆನಿಂಜೈಟಿಸ್‌ ಸಂಭವಿಸಬಹುದು.

ಮೆನಿಂಗೊಕೊಕಲ್ ಮೆನಿಂಜೈಟಿಸ್ – ವಿನಾಶಕಾರಿ ಸೋಂಕು

ಮೆನಿಂಗೊಕೊಕಲ್ ಮೆನಿಂಜೈಟಿಸ್ – ಆಕ್ರಮಣಕಾರಿ ಮೆನಿಂಗೊಕೊಕಲ್ ಕಾಯಿಲೆ (ಐಎಂಡಿ) ಎಂಬುದು ನೈಸೇರಿಯಾ ಮೆನಿಂಗಿಟಿಡಿಸ್‌ನಿಂದ ಉಂಟಾಗುವ ಅಪರೂಪದ ವಿನಾಶಕಾರಿ ಬ್ಯಾಕ್ಟೀರಿಯಾದ ಸೋಂಕು. ಇದು ಸಾಮಾನ್ಯವಾಗಿ ಮೆದುಳಿನ ಸೋಂಕು (ಮೆನಿಂಜೈಟಿಸ್) ಮತ್ತು / ಅಥವಾ ರಕ್ತದ ಸೋಂಕಿಗೆ (ಸೆಪ್ಟಿಸೆಮಿಯಾ ಅಥವಾ ರಕ್ತ ವಿಷ) ಕಾರಣವಾಗುತ್ತದೆ (2). ಉತ್ತಮವಾಗಿ ವೈದ್ಯಕೀಯ ಆರೈಕೆಯು ದೊರೆಯದಿದ್ದ ಸಂದರ್ಭದಲ್ಲಿ ಈ ರೋಗವು ಕೆಲವೇ ಗಂಟೆಗಳಲ್ಲಿ ವ್ಯಕ್ತಿಯನ್ನು ಕೊಲ್ಲಬಹುದು ಅಥವಾ ಅವರ ಕುಟುಂಬದ (2) ಮೇಲೆ ತೀವ್ರವಾದ ದೀರ್ಘಕಾಲೀನ ವಿನಾಶಕಾರಿ ಪರಿಣಾಮವನ್ನು ಬೀರಬಹುದು, ಸಮಾಜದ ಮೇಲೆ ಆಜೀವ ಆರ್ಥಿಕ ಪರಿಣಾಮಕ್ಕೆ ಕಾರಣವಾಗಬಹುದು (3).

ಇದೊಂದು ಅನಿರೀಕ್ಷಿತವಾದ ಕಾಯಿಲೆಯಾಗಿದ್ದು, ಯಾವುದೇ ವಯಸ್ಸಿನಲ್ಲಿ, ವಿಶ್ವದ ಎಲ್ಲಿಯಾದರೂ ಯಾರಿಗಾದರು ಕಾಣಿಸಿಕೊಳ್ಳಬಹುದಾಗಿದೆ, ಇದಲ್ಲದೇ ಈ ಕಾಯಿಲೆಗೆ ತುತ್ತಾದ ಹಲವು ಮಂದಿಗಳು ಹಚ್ಚಿನ ಅಪಾಯಕ್ಕೆ ಗುರಿಯಾಗಿರುತ್ತಾರೆ (2). ಕೆಲವು ಸಂದರ್ಭಗಳಲ್ಲಿ, ಮೊದಲ ರೋಗಲಕ್ಷಣ ಕಾಣಿಸಿಕೊಂಡ 24 ಗಂಟೆಗಳ ಒಳಗೆ ರೋಗಿಯೂ ಜೀವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ (4). ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ 50,000 ಕ್ಕೂ ಹೆಚ್ಚು ಮೆನಿಂಗೊಕೊಕಲ್ ಮೆನಿಂಜೈಟಿಸ್‌ಗೆ ಪ್ರಕರಣಗಳನ್ನು ಗುರುತಿಸಲಾಗಿದೆ, ಇದರಲ್ಲಿ 3,000 ಕ್ಕೂ ಹೆಚ್ಚು ಸಾವು ಸಂಭವಿಸಿದೆ (5). ವರದಿಗಳ ಪ್ರಕಾರ, ರೋಗವು ಕಾಣಿಸಿಕೊಳ್ಳವ 10 ಜನರಲ್ಲಿ ಒಬ್ಬರು ಅದರಿಂದ ಸಾಯಬಹುದು ಮತ್ತು 10-20% ಬದುಕುಳಿದರು ಅ0ಗವಿಚ್ಚೆದನೆ, ಕಿವುಡುತನ ಅಥವಾ ಮೆದುಳಿನ ಹಾನಿಯಂತಹ ಸಮಸ್ಯೆಗೆ ಗುರಿಯಾಗಬಹುದು. (6), (7)

ಯಾರಾದರೂ ಈ ಸೋಂಕಿಗೆ ತುತ್ತಾಗುವ ಅಪಾಯದಲ್ಲಿರಬಹುದು

ಮೆನಿಂಗೊಕೊಕಲ್ ಮೆನಿಂಜೈಟಿಸ್ ಕಾಯಿಲೆ ವಿಶ್ವದ ಯಾವುದೇ ಮೂಲೆಯಲ್ಲಿ, ಯಾರ ಮೇಲಾದರೂ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಹದಿಹರೆಯದವರು ಮತ್ತು ಯುವ ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ, ಹೆಚ್ಚಿನ ಮೆನಿಂಗೊಕೊಕಲ್ ಮೆನಿಂಜೈಟಿಸ್ ಕಾಯಿಲೆ ಆರೋಗ್ಯವಂತ ವ್ಯಕ್ತಿಗಳಲ್ಲಿ ಗುರುತಿಸಬಹುದಾದ ಅಪಾಯಕಾರಿ ಅಂಶಗಳಿಲ್ಲದೆ ಕಾಣಿಸಿಕೊಳ್ಳುತ್ತದೆ. ಗಮನಾರ್ಹವಾಗಿ, ವಯಸ್ಸಾದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕಾಯಿಲೆಯೂ ಕಾಣಿಸಿಕೊಳ್ಳುತ್ತದೆ. (8)

ಹೆಚ್ಚಾಗಿ ಕಂಡುಬರುವ ಸಾಧ್ಯತೆಗಳು:

  • ಸಮುದಾಯಗಳಲ್ಲಿ ವಾಸಿಸುವುದು (ಉದಾ. ವಸತಿ ನಿಲಯಗಳು, ಮಿಲಿಟರಿ ಮತ್ತು ಕಾಲೇಜು ವಿದ್ಯಾರ್ಥಿಗಳು) ಅಥವಾ ಮೆಕ್ಕಾ ಇಸ್ಲಾಮಿಕ್ ತೀರ್ಥಯಾತ್ರೆಯಾದ ಹಜ್ ನಂತಹ ಸಾಮೂಹಿಕ ಸಭೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಈ ರೋಗ ಹರಡುವ ಸಾಧ್ಯತೆ ಇದೆ. (9)
  • ಎಚ್‌ಐವಿ ಸೋಂಕು / ಅಸ್ಪ್ಲೆನಿಯಾ / ರಾಜಿ ಮಾಡಿಕೊಂಡ ಪ್ರತಿರಕ್ಷಣಾ ವ್ಯವಸ್ಥೆ / ಇಮ್ಯುನೊಗ್ಲಾಬ್ಯುಲಿನ್‌ಗಳ ಕೊರತೆ ಅಥವಾ ಹೆಚ್ಚಾಗುವಿಕೆ ಸೇರಿದಂತೆ ಕೆಲವು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಈ ಕಾಯಿಲೆಯೂ ಹೆಚ್ಚಾಗಿ ಕಾಣಿಸಿಕೊಳ್ಳತ್ತದೆ. (9)

ಮೆನಿಂಜೈಟಿಸ್ ಹೆಚ್ಚಾಗಿರುವ ಆಫ್ರಿಕಾದಲ್ಲಿನ ಸ್ಥಳೀಯ ಪ್ರದೇಶಗಳಿಗೆ ಪ್ರಯಾಣ ಮಾಡುವುದರಿಂದ ಈ ಕಾಯಿಲೆ ಬರಯವ ಸಾಧ್ಯ ಇದೆ. (9)

ಎಲ್ಲಾ ರೀತಿಯ ಲಸಿಕೆ-ತಡೆಗಟ್ಟಬಹುದಾದ ಮೆನಿಂಜೈಟಿಸ್ ವಿರುದ್ಧ ಸಮಗ್ರ ರಕ್ಷಣೆ ಒದಗಿಸಬೇಕಿದೆ

ಮೆನಿಂಜೈಟಿಸ್ ಗಂಭೀರ ಕಾಯಿಲೆಯಾಗಿದ್ದು, ಇದು ಬ್ಯಾಕ್ಟೀರಿಯಾ, ವೈರಲ್ ಮತ್ತು / ಅಥವಾ ಇತರ ಕಾರಣಗಳಿಂದ ಉಂಟಾಗುತ್ತದೆ (10)..

ದುರದೃಷ್ಟವಶಾತ್ ಈ ಕಾಲೆಯಿಗೆ ವ್ಯಾಕ್ಸಿನೇಷನ್ ಸರಿಯಾದ ಸಮಯದಲ್ಲಿ ಬೇಕಾಗಿರುವ ವ್ಯಕ್ತಿಗಳಿಗೆ ಲಭ್ಯವಿಲ್ಲ .

ಮೆನಿಂಜೈಟಿಸ್‌ನ 3 ಪ್ರಮುಖ ಕಾರಣಗಳ ವಿರುದ್ಧ ವ್ಯಾಕ್ಸಿನೇಷನ್ ಲಭ್ಯವಿದೆ.

  • ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ, ಅದು ನ್ಯುಮೋಕೊಕಲ್ ಮೆನಿಂಜೈಟಿಸ್ಗೆ ಕಾರಣವಾಗುತ್ತದೆ
  • ಹಿಮೋಫಿಲಸ್ ಶೀತಜ್ವರ ಟೈಪ್ ಬಿ, ಅದು ಹಿಮೋಫಿಲಸ್ ಮೆನಿಂಜೈಟಿಸ್ಗೆ ಕಾರಣವಾಗುತ್ತದೆ
  • ಮೆನಿಂಗೊಕೊಕಲ್ ಮೆನಿಂಜೈಟಿಸ್ಗೆ ಕಾರಣವಾಗುವ ನೀಸೇರಿಯಾ ಮೆನಿಂಗಿಟೈಡ್ಸ್

ಬ್ಯಾಕ್ಟೀರಿಯಾದ ಮೆನಿಂಜೈಟಿಸ್‌ನ ಈ 3 ಸಾಮಾನ್ಯ ಕಾರಣಗಳು ಮತ್ತು ನಿಮ್ಮ ಮಗುವನ್ನು ಅವುಗಳ ವಿರುದ್ಧ ರಕ್ಷಿಸುವ ವಿಧಾನಗಳ ಕುರಿತು ನಿಮ್ಮ ಮಕ್ಕಳ ವೈದ್ಯರೊಂದಿಗೆ ಚರ್ಚಿಸಿ.

ಒಟ್ಟಿಗೆ ಮೆನಿಂಜೈಟಿಸ್ ವಿರುದ್ಧ

ಮೆನಿಂಗೊಕೊಕಲ್ ಮೆನಿಂಜೈಟಿಸ್‌ ಮಾನವ ಸಮುದಾಯಕ್ಕೆ ಎದುರಾಗಿರುವ ಅತೀ ದೊಡ್ಡ ಬೆದರಿಕೆಯಾಗಿದೆ, ಆದರೆ ಈ ಕಾಯಿಲೆಯ ಬಗ್ಗೆ ತಿಳುವಳಿಕೆ ಕಡಿಮೆ. ವಿನಾಶಕಾರಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಚಳವಳಿಗೆ ಸೇರಿ. ಈ ಲೇಖನವನ್ನು ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ ಆದ್ದರಿಂದ ನಾವೆಲ್ಲರೂ “ಒಟ್ಟಿಗೆ ಮೆನಿಂಜೈಟಿಸ್ ವಿರುದ್ಧ” ನಿಲ್ಲಬಹುದು

ಈ ಲೇಖನವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಸನೋಫಿ ಪಾಶ್ಚರ್ ಬಿಡುಗಡೆ ಮಾಡಿದ್ದಾರೆ.

Author: Srinidhi

Was this article helpful?
thumbsupthumbsdown

Community Experiences

Join the conversation and become a part of our vibrant community! Share your stories, experiences, and insights to connect with like-minded individuals.

Latest Articles